ಜಿಲ್ಲಾ ನ್ಯಾಯಾಲಯದ ಬಗ್ಗೆ
ಬಾಗಲಕೋಟೆ ಜಿಲ್ಲೆಯ ನ್ಯಾಯಾಂಗ ಆಡಳಿತದ ಸಂಕ್ಷಿಪ್ತ ಇತಿಹಾಸ
ಬ್ರಿಟಿಷ ಆಳ್ವಿಕೆಗಿಂತ ಪೂರ್ವದಲ್ಲಿ ಅಂದರೆ 1830 ರ ಪೂರ್ವದಲ್ಲಿ ಬಿಜಾಪುರವು ಬಾಗಲಕೋಟೆಯನ್ನೊಳಗೊಂಡಂತೆ ಅನೇಕ ಭೂಭಾಗಗಳನ್ನು ಒಳಗೊಂಡಿದ್ದು ಈ ಭಾಗವು ಎಲ್ಲರಿಗೂ ಗೊತ್ತಿರುವಂತೆ ಚಾಲುಕ್ಯರ, ಹೊಯ್ಸಳರ, ವಿಜಯನಗರ, ಪೇಶ್ವೆಯರ, ನವಾಬರ ಮರಾಠರವರೆಗೂ ಅಂದರೆ ಮುಧೋಳ, ಜಮಖಂಡಿ, ತಿಕೋಟ ರಾಜ್ಯಗಳ ಘೊರ್ಪಡೆ, ಪಟವರ್ಧನರ ಆಳ್ವಿಕೆಗೆ ಒಳಪಟ್ಟಿದ್ದು ತದನಂತರ ಈ ರಾಜ್ಯಗಳು ಬ್ರಿಟಿಷರ ಅಧೀನವಾಗಿಯೇ ಉಳಿದವು.
ಬ್ರಿಟಿಷರ ಪೂರ್ವದಲ್ಲಿ ನಮ್ಮ ನ್ಯಾಯಿಕ ವ್ಯವಸ್ಥೆಯನ್ನು 'ಅದಾಲತ್" ಎಂದು ಕರೆಯುತ್ತಿದ್ದರು. ಬ್ರಿಟಿಷರ ಅಧೀನವಾಗಿದ್ದ ಬಾಂಬೆ ಸರ್ಕಾರವು "ಬ್ರಿಟಿಷ ನ್ಯಾಯಾಂಗ ಆಡಳಿತ " ವ್ಯವಸ್ಥೆಯನ್ನು ಅಳವಡಿಸಿಕೊಂಡಿತು. ಈ ಬಗ್ಗೆ ಪ್ರಥಮವಾಗಿ " ಬಾಂಬೆ ನಿಯಂತ್ರಣ ಕಾಯಿದೆ 1827” ಅಧಿನಿಯಮವಿತ್ತು. ಈ ಅಧಿನಿಯಮದಲ್ಲಿ 'ಅದಾಲತ್' ಎಂಬ ಪದದ ಉಲ್ಲೇಖಗಳನ್ನು ನಾವು ನೋಡಬಹುದು. ಈ ಅದಾಲತ್ ವ್ಯವಸ್ಥೆಯು ‘ಸಿವಿಲ್ ನ್ಯಾಯಾಲಯಗಳ ಕಾಯಿದೆ’ 1869 ಜಾರಿಗೆ ಬರುವವರೆಗೂ ಮುಂದುವರೆಯಿತು.
ಈ ಆಡಳಿತದಲ್ಲಿದ್ದ ಕೋರ್ಟಗಳ ಬಗ್ಗೆ ತಿಳಿಯಲು 1830 ರಿಂದ ಕಾಲಕಾಲಕ್ಕೆ ಬದಲಾದ ಜಿಲ್ಲಾ ಕೇಂದ್ರಗಳ ಬಗ್ಗೆಯೂ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಬ್ರಿಟಿಷ ಆಳ್ವಿಕೆ ಪ್ರಾರಂಭಗೊಂಡಾಗ ಕೃಷ್ಣಾ ನದಿಯ ಉತ್ತರಕ್ಕಿದ್ದ ಬಿಜಾಪುರ ಜಿಲ್ಲೆ ಸೋಲಾಪುರ, ಸತಾರ ಜಿಲ್ಲೆಗಳಾಗಿ ವಿಂಗಡಣೆಗೊಂಡಿತ್ತು. ಬಿಜಾಪುರ ಮತ್ತು ಅದರ ಪಶ್ಚಿಮ ಭಾಗವು ಉತ್ತರ ಮರಾಠ ಮತ್ತು ಸತಾರ ಜಿಲ್ಲೆಗಳೆಂದು ಪರಿಗಣಿಸಲ್ಪಟ್ಟಿತ್ತು. ಇನ್ನೂಳಿದ ಭಾಗಗಳಾದ ಇಂಡಿ, ಸಿಂದಗಿ, ಬಸವನ ಬಾಗೇವಾಡಿ, ಮುದ್ದೇಬಿಹಾಳ ಇವೆಲ್ಲವೂ ಸೋಲಾಪುರ ಜಿಲ್ಲೆಯಲ್ಲಿದ್ದವು. ಕೃಷ್ಣಾ ನದಿಯ ದಕ್ಷಿಣ ಭಾಗಕ್ಕಿರುವ ಬಾದಾಮಿ, ಹುನಗುಂದ, ಬೀಳಗಿ, ಬಾಗಲಕೋಟೆ ತಾಲ್ಲೂಕುಗಳು ಬೆಳಗಾವಿ ಜಿಲ್ಲೆಯಲ್ಲಿದ್ದು ನಂತರ ಧಾರವಾಡ ಜಿಲ್ಲೆಗೆ ಸೇರಿಸಲಾಯಿತು. 1864 ನೇ ಇಸವಿಯಲ್ಲಿ ಕಲಾದಗಿಯು ಜಿಲ್ಲಾ ಕೇಂದ್ರದ ರಚನೆಯಾಯಿತು. ಅಂದಿನಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿ ಫೌಜದಾರಿ ಆಡಳಿತವು ಕಂದಾಯ ಅಧಿಕಾರಿಗಳಲ್ಲಿಯೇ ಇತ್ತು. ಆದರೆ ಸೆಷನ್ಸ ನ್ಯಾಯಾಧೀಶರು ಎಂದು ಕರೆಯಿಸಿಕೊಳ್ಳುವ ಜಿಲ್ಲಾ ನ್ಯಾಯಾಧೀಶರು ಪ್ರಥಮ ದರ್ಜೆಯ ದಂಡಾಧಿಕಾರಿಗಳ ಉಪ ವಿಭಾಗೀಯ ದಂಡಾಧಿಕಾರಿಗಳ ಜಿಲ್ಲಾ ದಂಡಾಧಿಕಾರಿಗಳ ನಿರ್ಣಯಗಳ ಮೇಲ್ಮನವಿ ಸಹಾಯಕ ನ್ಯಾಯಾಧೀಶರು ಮತ್ತು ಜಿಲ್ಲಾ ನ್ಯಾಯಾಧೀಶರು ಮೇಲ್ಮನವಿ ಪ್ರಾಧಿಕಾರವಾಗಿದ್ದ ದಿವಾಣಿ (ವ್ಯವಹಾರಿಕ) ಪ್ರಕರಣಗಳನ್ನು ವಿಚಾರಣೆ ನಡೆಸುತ್ತಿದ್ದರು. ಕಂದಾಯ ಜಿಲ್ಲೆಗಳಲ್ಲಿ[...]
ಮತ್ತಷ್ಟು ಓದು
- ಗೆಜೆಟ್ ಅಧಿಸೂಚನೆ ಕೆ ಎಸ್ ಎಲ್ ಎಸ್ ಎ: ಅಭ್ಯರ್ಥಿಗಳ ನೇರ ನೇಮಕಾತಿ ಶಾಖಾಧಿಕಾರಗಳ ಹುದ್ದೆಗಳಿಗಾಗಿ
- ಗುಳೇದಗುಡ್ಡ ಕಂದಾಯ ತಾಲೂಕಿಗೆ ಹೊಸದಾಗಿ ರಚಿಸಲಾದ ನಾಲ್ಕು ನೋಟರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ
- “ಬಾದಾಮಿ ಕಂದಾಯ ತಾಲೂಕಿಗೆ” ಹೊಸದಾಗಿ ರಚಿಸಲಾದ ನಾಲ್ಕು ನೋಟರಿ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ
- 2020 ರ ಕ್ರಿಮಿನಲ್ ಮೇಲ್ಮನವಿ ಸಂಖ್ಯೆ 730 ರಲ್ಲಿ ಗೌರವಾನ್ವಿತ ಸುಪ್ರೀಂ ಕೋರ್ಟ್ ಆದೇಶ
- ಸಾರ್ವಜನಿಕ ಸೂಚನೆ: ಆವೃತ್ತಿ 4.0 ಕ್ಕೆ ಇ-ಕೋರ್ಟ್ ಸೇವೆಗಳ ಮೊಬೈಲ್ ಅಪ್ಲಿಕೇಶನ್
- 01.01.2026 ರಂದು ಬಾಗಲಕೋಟೆ ಜಿಲ್ಲಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳ ತಾತ್ಕಾಲಿಕ ಹಿರಿಯತಾ ಪಟ್ಟಿ
- 01.01.2025 ರಂತೆ ಬಾಗಲಕೋಟೆ ಜಿಲ್ಲಾ ಘಟಕದ ಅಧಿಕಾರಿಗಳ ಅಂತಿಮ ಜೇಷ್ಠತಾ ಪಟ್ಟಿ.
- 01.01.2024 ರಂದು ಬಾಗಲಕೋಟೆ ಜಿಲ್ಲಾ ಘಟಕದ ನ್ಯಾಯಾಂಗ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ “ಹಿರಿಯ ಶೆರಿಸ್ಟೆಡರ್ಗಳು/ ಬೆಂಚ್ ಕ್ಲರ್ಕ್ ಗ್ರೇಡ್-I” ಕೇಡರ್ನಲ್ಲಿನ ಅಧಿಕಾರಿಗಳ ಅಂತಿಮ ಹಿರಿತನದ ಪಟ್ಟಿ.
- 01.01.2024 ರಂತೆ ಅಧಿಕಾರಿಗಳ ತಾತ್ಕಾಲಿಕ ಜೇಷ್ಠತಾ ಪಟ್ಟಿ
- 01.01.2023 ರಂತೆ ಅಧಿಕಾರಿಗಳ ಅಂತಿಮ ಜೇಷ್ಠತಾ ಪಟ್ಟಿ
- ಕರ್ನಾಟಕ ಉಚ್ಛ ನ್ಯಾಯಾಲಯದ ಸುತ್ತೋಲೆ- ಎಲ್ ಆರ್ ಸಿ 09/ಕೌನ್ಸಿಲ್ ಮೀಟಿಂಗ್/2015 ದಿನಾಂಕ 24.02.2024
- ಇ-ಫೈಲಿಂಗ್ 3.0 ಕುರಿತು ಅಧಿಸೂಚನೆ
ಯಾವುದೇ ಪೋಸ್ಟ್ ಕಂಡುಬಂದಿಲ್ಲ.
ತ್ವರಿತ ಲಿಂಕ್ಗಳು
ಇಕೋರ್ಟ್ ಸೇವೆಗಳು

ಪ್ರಕರಣದ ಸ್ಥಿತಿ
ಪ್ರಕರಣದ ಸ್ಥಿತಿ

ನ್ಯಾಯಾಲಯದ ಆದೇಶ
ನ್ಯಾಯಾಲಯದ ಆದೇಶ

ವ್ಯಾಜ್ಯಗಳ ಪಟ್ಟಿ
ವ್ಯಾಜ್ಯಗಳ ಪಟ್ಟಿ

ಕೇವಿಯೇಟ್ ಹುಡುಕಾಟ
ಕೇವಿಯೇಟ್ ಹುಡುಕಾಟ
ಪ್ರಮುಖ ಲಿಂಕ್ಗಳು
ಇತ್ತೀಚಿನ ಪ್ರಕಟಣೆಗಳು
- ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ಇವರು ದಿನಾಂಕ 31-12-2024 ಕ್ಕೆ ಅನ್ವಯವಾಗುವಂತೆ ತಯಾರಿಸಲಾದ ಹಿರಿಯ ಶಿರಸ್ತೇದಾರರು/ಬೆಂಚ್ ಕ್ಲರ್ಕ್ ಗ್ರೇಡ್-1 ರವರ ತಾತ್ಕಾಲಿಕ ಜೇಷ್ಠತಾ ಪಟ್ಟಿಯ ಪ್ರಕಟಣೆ.
- ಪಿಎಸ್ಸಿಜೆ (PSCJ) ಮತ್ತು ಸಿಜೆಎಂ (CJM), ಬಾಗಲಕೋಟೆ ಇವರಿಂದ ಅಧಿಸೂಚನೆ ಸಂಖ್ಯೆ 8/2026, ದಿನಾಂಕ: 13-08-2026
- ಬಾಗಲಕೋಟೆ ಜಿಲ್ಲೆಯ ಆಗಸ್ಟ್-2026 ರ ಅಪರಾಧ ಪ್ರಕರಣಗಳ ಪಟ್ಟಿ
- ಗೆಜೆಟ್ ಅಧಿಸೂಚನೆ ಕೆ ಎಸ್ ಎಲ್ ಎಸ್ ಎ: ಅಭ್ಯರ್ಥಿಗಳ ನೇರ ನೇಮಕಾತಿ ಶಾಖಾಧಿಕಾರಗಳ ಹುದ್ದೆಗಳಿಗಾಗಿ
- ಆಗಸ್ಟ್-2026 ರ ಬಾಗಲಕೋಟೆ ಜಿಲ್ಲೆಯ ಸಿವಿಲ್ ಪ್ರಕರಣಗಳ ದಾಸ್ತಾನು