ಇತಿಹಾಸ
ಬಾಗಲಕೋಟೆ ಜಿಲ್ಲೆಯ ನ್ಯಾಯಾಂಗ ಆಡಳಿತದ ಸಂಕ್ಷಿಪ್ತ ಇತಿಹಾಸ
ಬ್ರಿಟಿಷ ಆಳ್ವಿಕೆಗಿಂತ ಪೂರ್ವದಲ್ಲಿ ಅಂದರೆ 1830 ರ ಪೂರ್ವದಲ್ಲಿ ಬಿಜಾಪುರವು ಬಾಗಲಕೋಟೆಯನ್ನೊಳಗೊಂಡಂತೆ ಅನೇಕ ಭೂಭಾಗಗಳನ್ನು ಒಳಗೊಂಡಿದ್ದು ಈ ಭಾಗವು ಎಲ್ಲರಿಗೂ ಗೊತ್ತಿರುವಂತೆ ಚಾಲುಕ್ಯರ, ಹೊಯ್ಸಳರ, ವಿಜಯನಗರ, ಪೇಶ್ವೆಯರ, ನವಾಬರ ಮರಾಠರವರೆಗೂ ಅಂದರೆ ಮುಧೋಳ, ಜಮಖಂಡಿ, ತಿಕೋಟ ರಾಜ್ಯಗಳ ಘೊರ್ಪಡೆ, ಪಟವರ್ಧನರ ಆಳ್ವಿಕೆಗೆ ಒಳಪಟ್ಟಿದ್ದು ತದನಂತರ ಈ ರಾಜ್ಯಗಳು ಬ್ರಿಟಿಷರ ಅಧೀನವಾಗಿಯೇ ಉಳಿದವು.
ಬ್ರಿಟಿಷರ ಪೂರ್ವದಲ್ಲಿ ನಮ್ಮ ನ್ಯಾಯಿಕ ವ್ಯವಸ್ಥೆಯನ್ನು ‘ಅದಾಲತ್” ಎಂದು ಕರೆಯುತ್ತಿದ್ದರು. ಬ್ರಿಟಿಷರ ಅಧೀನವಾಗಿದ್ದ ಬಾಂಬೆ ಸರ್ಕಾರವು “ಬ್ರಿಟಿಷ ನ್ಯಾಯಾಂಗ ಆಡಳಿತ ” ವ್ಯವಸ್ಥೆಯನ್ನು ಅಳವಡಿಸಿಕೊಂಡಿತು. ಈ ಬಗ್ಗೆ ಪ್ರಥಮವಾಗಿ ” ಬಾಂಬೆ ನಿಯಂತ್ರಣ ಕಾಯಿದೆ 1827” ಅಧಿನಿಯಮವಿತ್ತು. ಈ ಅಧಿನಿಯಮದಲ್ಲಿ ‘ಅದಾಲತ್’ ಎಂಬ ಪದದ ಉಲ್ಲೇಖಗಳನ್ನು ನಾವು ನೋಡಬಹುದು. ಈ ಅದಾಲತ್ ವ್ಯವಸ್ಥೆಯು ‘ಸಿವಿಲ್ ನ್ಯಾಯಾಲಯಗಳ ಕಾಯಿದೆ’ 1869 ಜಾರಿಗೆ ಬರುವವರೆಗೂ ಮುಂದುವರೆಯಿತು.
ಈ ಆಡಳಿತದಲ್ಲಿದ್ದ ಕೋರ್ಟಗಳ ಬಗ್ಗೆ ತಿಳಿಯಲು 1830 ರಿಂದ ಕಾಲಕಾಲಕ್ಕೆ ಬದಲಾದ ಜಿಲ್ಲಾ ಕೇಂದ್ರಗಳ ಬಗ್ಗೆಯೂ ತಿಳಿದುಕೊಳ್ಳುವುದು ಅವಶ್ಯಕವಾಗಿದೆ. ಬ್ರಿಟಿಷ ಆಳ್ವಿಕೆ ಪ್ರಾರಂಭಗೊಂಡಾಗ ಕೃಷ್ಣಾ ನದಿಯ ಉತ್ತರಕ್ಕಿದ್ದ ಬಿಜಾಪುರ ಜಿಲ್ಲೆ ಸೋಲಾಪುರ, ಸತಾರ ಜಿಲ್ಲೆಗಳಾಗಿ ವಿಂಗಡಣೆಗೊಂಡಿತ್ತು. ಬಿಜಾಪುರ ಮತ್ತು ಅದರ ಪಶ್ಚಿಮ ಭಾಗವು ಉತ್ತರ ಮರಾಠ ಮತ್ತು ಸತಾರ ಜಿಲ್ಲೆಗಳೆಂದು ಪರಿಗಣಿಸಲ್ಪಟ್ಟಿತ್ತು. ಇನ್ನೂಳಿದ ಭಾಗಗಳಾದ ಇಂಡಿ, ಸಿಂದಗಿ, ಬಸವನ ಬಾಗೇವಾಡಿ, ಮುದ್ದೇಬಿಹಾಳ ಇವೆಲ್ಲವೂ ಸೋಲಾಪುರ ಜಿಲ್ಲೆಯಲ್ಲಿದ್ದವು. ಕೃಷ್ಣಾ ನದಿಯ ದಕ್ಷಿಣ ಭಾಗಕ್ಕಿರುವ ಬಾದಾಮಿ, ಹುನಗುಂದ, ಬೀಳಗಿ, ಬಾಗಲಕೋಟೆ ತಾಲ್ಲೂಕುಗಳು ಬೆಳಗಾವಿ ಜಿಲ್ಲೆಯಲ್ಲಿದ್ದು ನಂತರ ಧಾರವಾಡ ಜಿಲ್ಲೆಗೆ ಸೇರಿಸಲಾಯಿತು. 1864 ನೇ ಇಸವಿಯಲ್ಲಿ ಕಲಾದಗಿಯು ಜಿಲ್ಲಾ ಕೇಂದ್ರದ ರಚನೆಯಾಯಿತು. ಅಂದಿನಿಂದ ನ್ಯಾಯಾಂಗ ವ್ಯವಸ್ಥೆಯಲ್ಲಿ ಫೌಜದಾರಿ ಆಡಳಿತವು ಕಂದಾಯ ಅಧಿಕಾರಿಗಳಲ್ಲಿಯೇ ಇತ್ತು. ಆದರೆ ಸೆಷನ್ಸ ನ್ಯಾಯಾಧೀಶರು ಎಂದು ಕರೆಯಿಸಿಕೊಳ್ಳುವ ಜಿಲ್ಲಾ ನ್ಯಾಯಾಧೀಶರು ಪ್ರಥಮ ದರ್ಜೆಯ ದಂಡಾಧಿಕಾರಿಗಳ ಉಪ ವಿಭಾಗೀಯ ದಂಡಾಧಿಕಾರಿಗಳ ಜಿಲ್ಲಾ ದಂಡಾಧಿಕಾರಿಗಳ ನಿರ್ಣಯಗಳ ಮೇಲ್ಮನವಿ ಸಹಾಯಕ ನ್ಯಾಯಾಧೀಶರು ಮತ್ತು ಜಿಲ್ಲಾ ನ್ಯಾಯಾಧೀಶರು ಮೇಲ್ಮನವಿ ಪ್ರಾಧಿಕಾರವಾಗಿದ್ದ ದಿವಾಣಿ (ವ್ಯವಹಾರಿಕ) ಪ್ರಕರಣಗಳನ್ನು ವಿಚಾರಣೆ ನಡೆಸುತ್ತಿದ್ದರು. ಕಂದಾಯ ಜಿಲ್ಲೆಗಳಲ್ಲಿ ನ್ಯಾಯಾಂಗ ಆಡಳಿತವು ಮೇಲೆ ಹೇಳಿದಂತಹ ವ್ಯವಸ್ಥೆಯಲ್ಲಿ ನಡೆಯುತ್ತಿತ್ತು.
1855 ರಲ್ಲಿ ಪ್ರಸಕ್ತ ವಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳು ಬಿಜಾಪುರ ಜಿಲ್ಲಾ ನ್ಯಾಯಾಧೀಶರ ಅಡಿಯಲ್ಲಿ ಮತ್ತು ಅಧೀನ ನ್ಯಾಯಾಲಯ ಮತ್ತು ಉಪ ನ್ಯಾಯಾಧೀಶರ ಹುದ್ದೆಗಳ ಸಹ ಅಸ್ತಿತ್ವಕ್ಕೆ ಬಂದವು. ಆದರೆ ಮುಧೋಳ, ಜಮಖಂಡಿ, ತಿಕೋಟಾ ಸಂಸ್ಥಾನ ರಾಜ್ಯಗಳು ಈ ವ್ಯವಸ್ಥೆಯಲ್ಲಿ ಹೊರತಾಗಿದ್ದವು.
ಪ್ರಾರಂಭದಲ್ಲಿ ಪ್ರತಿ ತಾಲೂಕಿನ ಮಾಮಲೇದಾರ ಅಂದರೆ ಈ ತಹಶೀಲ್ದಾರ ಪ್ರಥಮ ದರ್ಜೆಯ ದಂಡಾಧಿಕಾರಿಯಾಗಿದ್ದರು. ಬಿಜಾಪುರ ಇಂಡಿ, ಸಿಂದಗಿ, ತಾಲೂಕಿನಲ್ಲಿ ಉಪ ನ್ಯಾಯಾಧೀಶರು ವರ್ಗ-II ನ್ಯಾಯಾಲಯಗಳು ಅಸ್ತಿತ್ವದಲ್ಲಿದ್ದವು. ಮುದ್ದೇಬಿಹಾಳದಲ್ಲಿ ಮುದ್ದೇಬಿಹಾಳ ಮತ್ತು ಬಸವನ ಬಾಗೇವಾಡಿ ತಾಲ್ಲೂಕು ಮತ್ತು ಬಾಗಲಕೋಟದಲ್ಲಿ ಬಾಗಲಕೋಟ, ಹುನಗುಂದ, ಬಾದಾಮಿ ಮತ್ತು ಬೀಳಗಿ ತಾಲೂಕಿಗೆ ಸಂಬಂಧಪಟ್ಟ ನ್ಯಾಯಾಲಯಗಳಿದ್ದವು. ಬಿಜಾಪುರದಲ್ಲಿ ಮಾತ್ರ ಒಂದೇ ಒಂದು ಉಪ ನ್ಯಾಯಾಧೀಶರ ನ್ಯಾಯಾಲಯವಿದ್ದು ಅಸೀಮಿತ ಅಧಿಕಾರ ವ್ಯಾಪ್ತಿ ಹೊಂದಿತ್ತು.
ರಾಜ್ಯ ಪುನರ್ ವಿಂಗಡಣೆಯಾದ ನಂತರವೇ ಒಂದರ ನಂತರ ಮತ್ತೊಂದು ದಿವಾಣಿ ನ್ಯಾಯಾಲಯಗಳು ತಾಲೂಕಿಗೊಂದರಂತೆ ಮತ್ತು ಹಿರಿಯ ದಿವಾಣಿ ನ್ಯಾಯಾಲಯಗಳು ಬಾಗಲಕೋಟೆ ಮತ್ತು ಜಮಖಂಡಿಯಲ್ಲಿ ಸ್ಥಾಪನೆಯಾದವು. ಜಮಖಂಡಿ ಮತ್ತು ಮುಧೋಳ ತಾಲ್ಲೂಕುಗಳು 1948 ರಲ್ಲಿಯಾದ ಸಂಸ್ಥಾನಗಳ ವಿಲೀನಕರಣದ ನಂತರ ಬಿಜಾಪುರ ಜಿಲ್ಲೆಯಲ್ಲಿ ಸೇರ್ಪಡೆಗೊಂಡವು. ತಿಕೋಟ ರಾಜ್ಯ ನ್ಯಾಯಾಲಯವನ್ನು ಕಳೆದುಕೊಂಡು ಬಿಜಾಪುರ ತಾಲೂಕಿನಲ್ಲಿ ಸೇರ್ಪಡೆಯಾಯಿತು.
1952 ರಿಂದ ವ್ಯವಹಾರಿಕ ಮತ್ತು ಫೌಜದಾರಿ ನ್ಯಾಯಾಡಳಿತವು ಜಂಟಿಯಾಗಿಯೇ ನಡೆದು ಅಸ್ತಿತ್ವದಲ್ಲಿದ್ದ ದಿವಾಣಿ ನ್ಯಾಯಾಧೀಶರು ಸಹ ಪ್ರಥಮ ದರ್ಜೆಯ ನ್ಯಾಯಿಕ ದಂಡಾಧಿಕಾರಿಗಳೆಂದು ಪದನಾಮ ಹೊಂದಿದರು. ಹಿಂದೆ ಅಸ್ತಿತ್ವದಲ್ಲಿದ್ದ ಮೂರು ಶ್ರೇಣಿಗಳ ದಂಡಾಧಿಕಾರಿಗಳು ಹಾಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಹುದ್ದೆಗಳು ಮುಂದುವರೆದವು. ಕಂದಾಯ ವಿಭಾಗಕ್ಕೆ ಸಂಬಂಧಿಸಿದಂತೆ ಕೇವಲ ಕಾರ್ಯಾಂಗೀಯ ದಂಡಾಧಿಕಾರಿಗಳ ವ್ಯವಸ್ಥೆಯು ಮುಂದುವರೆಯಿತು. ಬಾಗಲಕೋಟೆ ಮತ್ತು ಮೇಲೆ ಹೇಳಿದ ಇತರ ಜಿಲ್ಲೆಗಳಲ್ಲಿ ನ್ಯಾಯಾಲಯಗಳು 1864 ರಲ್ಲಿ ಅಸ್ತಿತ್ವಕ್ಕೆ ಬಂದವು. 1887 ರಲ್ಲಿ ನ್ಯಾಯಾಲಯ ಕಟ್ಟಡ ರಚನೆಗೊಂಡಿತು ಮತ್ತು ಹೆಚ್ಚುವರಿ ನ್ಯಾಯಾಲಯವು 1835 ರಲ್ಲಿ ಸ್ಥಾಪಿಸಲ್ಪಟ್ಟಿತು.
ಬಾಗಲಕೋಟೆಯು ಜಿಲ್ಲೆಯಾದ ನಂತರ ಬಾಗಲಕೋಟ ಜಿಲ್ಲಾ ನ್ಯಾಯಾಲಯವು 2001 ರಲ್ಲಿ ಸ್ಥಾಪನೆಗೊಂಡಿತು.
ಬಾಗಲಕೋಟೆ ಜಿಲ್ಲೆಯಲ್ಲಿನ ಪ್ರಸಕ್ತ ನ್ಯಾಯಾಂಗ ಸೇವೆಯ ವ್ಯವಸ್ಥೆ ಈ ಕೆಳಗಿನಂತಿದೆ.
ಬಾಗಲಕೋಟೆ
- ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ನ್ಯಾಯಾಲಯ.
- ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು-FTSC-I.
- I ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ನ್ಯಾಯಾಲಯ ಬಾಗಲಕೋಟ (ಜಮಖಂಡಿಯಲ್ಲಿ ಕುಳಿತಿರುವುದು).
- II ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ನ್ಯಾಯಾಲಯ.
- ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿಜೆಎಂ ನ್ಯಾಯಾಲಯ.
- I ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ.
- II ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ.
- ಸದಸ್ಯ ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಬಾಗಲಕೋಟ.
- ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಮತ್ತು ಜೆಎಂಎಫ್ಸಿ ನ್ಯಾಯಾಲಯ.
- ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಮತ್ತು ಜೆಎಂಎಫ್ಸಿ ನ್ಯಾಯಾಲಯ.
ಜಮಖಂಡಿ
- ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ.
- ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ.
- ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ.
- ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ.
ಮುಧೋಳ
- ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ.
- ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ.
- ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ.
- ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ.
ಹುನಗುಂದ
- ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ.
- ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ.
- ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ.
ಬಾದಾಮಿ
- ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ.
- ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ.
- ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ.
ಬೀಳಗಿ
- .ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ.
- ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ.
ಬನಹಟ್ಟಿ
- ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ.
- ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ.
ಗುಳೇದಗುಡ್ಡ
- ಇಟರ್ನರಿ ಕೋರ್ಟ್, ಗುಳೇದಗುಡ್ಡ.
ಕೆರೂರು
- ಇಟರ್ನರಿ ಕೋರ್ಟ್, ಕೆರೂರ್.
ಇಳಕಲ್
- ಇಟರ್ನರಿ ಕೋರ್ಟ್, ಇಳಕಲ್.